ಅಮೆರಿಕಾದ ಒರೆಗಾನ್ ಸ್ಟೇಟ್ ಕ್ಯಾಪಿಟಲ್‌ನಲ್ಲಿ "ಕುಟುಂಬಗಳಿಗೆ ಮತ್ತು ನೆರೆಹೊರೆಯವರಿಗೆ ಶಾಂತಿಯನ್ನು ತರುವ ತಾಯಿಯ ಪ್ರೀತಿಯ ಮಾತುಗಳು" ಎಂಬ ವಿಚಾರಗೋಷ್ಠಿ ನಡೆಯಿತು

ಗ್ಲೋಬಲ್ ಹೋಪ್ ಸಪೋರ್ಟರ್ಸ್ ಸ್ಥಳೀಯ ಸಮುದಾಯಗಳಾದ್ಯಂತ ಶಾಂತಿ ಮತ್ತು ಕಾಳಜಿಯ ಮಾತುಗಳನ್ನು ಉತ್ತೇಜಿಸುತ್ತಾರೆ


“ಕುಟುಂಬಗಳಿಗೆ ಮತ್ತು ನೆರೆಹೊರೆಯವರಿಗೆ ಶಾಂತಿ ತರುವ ತಾಯಿಯ ಪ್ರೀತಿಯ ಮಾತುಗಳು” ಎಂಬ ಶೀರ್ಷಿಕೆಯ ಒಂದು ಸೆಮಿನಾರ್ ಅನ್ನು ಏಪ್ರಿಲ್ 29, 2026 ರಂದು, ಅಮೆರಿಕಾ ಸಂಯುಕ್ತ ಸಂಸ್ಥಾನದ ಒರೆಗಾನ್‌ನ ಸೇಲಂನಲ್ಲಿರುವ ಒರೆಗಾನ್ ಸ್ಟೇಟ್ ಕ್ಯಾಪಿಟಲ್‌ನಲ್ಲಿ ನಡೆಸಲಾಯಿತು. ಕುಟುಂಬಗಳು, ನೆರೆಹೊರೆಯವರು ಮತ್ತು ವಿಶಾಲ ಸಮುದಾಯದ ನಡುವೆ ಆತ್ಮೀಯ ಸಂವಹನ ಮತ್ತು ಕಾಳಜಿಯ ಸಂಸ್ಕೃತಿಯನ್ನು ಉತ್ತೇಜಿಸಲು, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್‌ನ ಅಂತರರಾಷ್ಟ್ರೀಯ ಸ್ವಯಂಸೇವಕ ಗುಂಪಾದ ಗ್ಲೋಬಲ್ ಹೋಪ್ ಸಪೋರ್ಟರ್ಸ್ (ಹೋಪ್ ಸಪೋರ್ಟರ್ಸ್) ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.


ಒರೆಗಾನ್‌ನ ರಾಜ್ಯ ರಾಜಧಾನಿಯಾದ ಸೇಲಂ ಎಂಬ ಹೆಸರು “ಶಾಂತಿ” ಎಂಬ ಅರ್ಥದೊಂದಿಗೆ ಸಂಬಂಧ ಹೊಂದಿದೆ. ಈ ಸಂಬಂಧದಿಂದ ಪ್ರೇರಿತರಾಗಿ, ಒರೆಗಾನ್‌ನಲ್ಲಿರುವ ಹೋಪ್ ಸಪೋರ್ಟರ್ಸ್‌ರು ಕುಟುಂಬಗಳು, ನೆರೆಹೊರೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳ ನಡುವೆ ಮತ್ತು ರಾಜ್ಯದಾದ್ಯಂತ ಶಾಂತಿಯನ್ನು ಹರಡಲು “ಶಾಂತಿ ತರುವ ತಾಯಿಯ ಪ್ರೀತಿಯ ಮಾತುಗಳು” ಅಭಿಯಾನವನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದ್ದಾರೆ. ಬೀದಿ ಪ್ರದರ್ಶನಗಳು ಮತ್ತು ಸೆಮಿನಾರ್‌ಗಳ ಮೂಲಕ ಈ ಅಭಿಯಾನದ ಬಗ್ಗೆ ತಿಳಿದ ಸಾರ್ವಜನಿಕ ಅಧಿಕಾರಿಗಳು ಮತ್ತು ನಿವಾಸಿಗಳು ಇದರ ಸಂದೇಶಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಂತರ ರಾಜ್ಯ ಸರ್ಕಾರವು ಒರೆಗಾನ್ ಸ್ಟೇಟ್ ಕ್ಯಾಪಿಟಲ್‌ನಲ್ಲಿ ಸೆಮಿನಾರ್ ಅನ್ನು ಅನುಮೋದಿಸಿತು.


ಕಾರ್ಯಕ್ರಮದ ದಿನ, ತಾಯಿಯ ಪ್ರೀತಿಯ ಮಾತುಗಳನ್ನು ಒಳಗೊಂಡ ಅಭಿಯಾನ ಮಾಹಿತಿ ಫಲಕಗಳು, ಬ್ಯಾನರ್‌ಗಳು ಮತ್ತು ಕೈಯಿಂದ ತಯಾರಿಸಿದ ಘನಗಳನ್ನು ಸ್ಥಳದಾದ್ಯಂತ ಇರಿಸಲಾಗಿತ್ತು, ಇದು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಿತು. ಭಾಗವಹಿಸಿದವರು ತಾವು ಕೇಳಲು ಹೆಚ್ಚು ಬಯಸುವ ಮಾತುಗಳನ್ನು ಆಯ್ಕೆ ಮಾಡಲು ಸ್ಟಿಕರ್ ಮತದಾನದಲ್ಲಿ ಪಾಲ್ಗೊಂಡರು ಮತ್ತು ತಾಯಿಯ ಪ್ರೀತಿಯ ಒಂಬತ್ತು ಅಭಿವ್ಯಕ್ತಿಗಳನ್ನು ಪ್ರದರ್ಶಿಸುವ ಘನಗಳೊಂದಿಗೆ ಸ್ಮರಣಾರ್ಥ ಫೋಟೋಗಳಿಗೆ ಫೋಸ್ ನೀಡಿದರು.


ಸೆಮಿನಾರ್ ಸಮಯದಲ್ಲಿ, ತಾಯಿಯ ಪ್ರೀತಿಯ ಮಾತುಗಳು ದೈನಂದಿನ ಜೀವನದಲ್ಲಿ ಉತ್ತಮ ಸಂವಹನ ಮತ್ತು ಶಾಂತಿಯನ್ನು ಬೆಳೆಸಲು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಭಾಗವಹಿಸಿದವರು ಕಲಿತರು. ಪ್ರಸ್ತುತಿಯನ್ನು ಗಮನವಿಟ್ಟು ಆಲಿಸಿದ ನಂತರ, ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದವರೊಂದಿಗೆ ಈ ಅಭಿವ್ಯಕ್ತಿಗಳನ್ನು ಬಳಸುವುದನ್ನು ಅಭ್ಯಾಸ ಮಾಡಿದರು. ಭಾಗವಹಿಸಿದವರು ಆತ್ಮೀಯ ಮತ್ತು ಪ್ರೋತ್ಸಾಹದಾಯಕ ಮಾತುಗಳನ್ನು ಹಂಚಿಕೊಂಡಾಗ ಕೊಠಡಿಯು ನಗುವಿನಿಂದ ತುಂಬಿತ್ತು. ಸೇಲಂ ಮೇಯರ್ ಕೂಡ ಹೋಪ್ ಸಪೋರ್ಟರ್ಸ್‌ಗೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿ, ಅಭಿಯಾನ ಮತ್ತು ಕಾರ್ಯಕ್ರಮದಿಂದ ತಾವು ಎಷ್ಟು ಆಳವಾಗಿ ಪ್ರಭಾವಿತರಾದರು ಎಂಬುದನ್ನು ತಿಳಿಸಿದರು.


ಕುಟುಂಬಗಳು, ನೆರೆಹೊರೆಯವರು ಮತ್ತು ಸಮುದಾಯಗಳ ನಡುವೆ ಪರಸ್ಪರ ಗೌರವ ಮತ್ತು ಕಾಳಜಿಯ ಸಂಸ್ಕೃತಿಯನ್ನು ಹರಡಲು ಹೋಪ್ ಸಪೋರ್ಟರ್ಸ್‌ರು “ಶಾಂತಿಯ ಆರಂಭ: ತಾಯಿಯ ಪ್ರೀತಿಯ ಮಾತುಗಳು” ಅಭಿಯಾನವನ್ನು ಮುಂದುವರಿಸಿಕೊಂಡು ಹೋಗಲು ಯೋಜಿಸುತ್ತಿದ್ದಾರೆ.