
‘어머니 사랑과 평화의 날’ & UN ‘국제 관용의 날’ 기념 캠페인
ಈ ಲೋಕದಲ್ಲಿ ಹುಟ್ಟಿದಾಗ ಮೊಟ್ಟಮೊದಲ ಬಾರಿ ಸ್ವೀಕರಿಸಿದ ತಾಯಿಯ ಪ್ರೀತಿ.
ಮಕ್ಕಳಿಗಾಗಿ ಆಕೆಯ ಷರಿತ್ತಿಲ್ಲದ ಬೆಂಬಲ, ಕಾಳಜಿ, ತ್ಯಾಗ ಮತ್ತು ಮಕ್ಕಳ ಸೇವೆ
ರಾಷ್ಟ್ರಗಳು, ಜನಾಂಗಗಳು ಮತ್ತು ಸಂಸ್ಕೃತಿಗಳನ್ನು ಮೀರಿದ ಮಾನವೀಯತೆಯೊಂದಿಗೆ ಪ್ರತಿಧ್ವನಿಸುವ ಸದ್ಗುಣ ಮೌಲ್ಯಗಳಾಗಿವೆ.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ 2024ರಲ್ಲಿ ನವೆಂಬರ್ 1ನ್ನು"ತಾಯಿಯ ಪ್ರೀತಿ ಮತ್ತು ಶಾಂತಿ ದಿನ" ಎಂದು ಗೊತ್ತುಪಡಿಸುವ ಮೂಲಕ ತನ್ನ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಸಭೆಯು ಪ್ರತಿ ನವೆಂಬರ್‌ನಲ್ಲಿ ದೈನಂದಿನ ಜೀವನದಲ್ಲಿ ತಾಯಿಯ ಪ್ರೀತಿಯನ್ನು ಅಭ್ಯಾಸ ಮಾಡುತ್ತಾ ಸಂವಹನ ಮತ್ತು ಸಾಮರಸ್ಯವನ್ನು ಪ್ರೋತ್ಸಾಹಿಸಲು ಅಭಿಯಾನವನ್ನು ನಡೆಸುತ್ತದೆ.
ಈ ಅಭಿಯಾನವು ವಿಶ್ವಸಂಸ್ಥೆಯ
ಅಂತರರಾಷ್ಟ್ರೀಯ ಸಹಿಷ್ಣುತಾ ದಿನದೊಂದಿಗೆ ಹೊಂದಿಕೆಯಾಗುತ್ತದೆ.
ಸಂಘರ್ಷ, ಹಿಂಸೆ ಮತ್ತು ಯುದ್ಧಗಳಿಂದ ತುಂಬಿರುವ ಈ ಯುಗದಲ್ಲಿ,
ತಾಯಿಯ ಪ್ರೀತಿ ವಿಶ್ವದಾದ್ಯಂತ ಹರಡಿ ಸುಸ್ಥಿರ ಶಾಂತಿಯನ್ನು ತರಲಿ ಎಂದು ನಾವು ಆಶಿಸುತ್ತೇವೆ.
ತಾಯಿಯ ಪ್ರೀತಿಯ ಭಾಷೆ'
ಮೂಲಕ ಹಂಚಿಕೊಳ್ಳಲಾದ ಶಾಂತಿಯ ಕಥೆಯನ್ನು ವೀಡಿಯೊದಲ್ಲಿ ವೀಕ್ಷಿಸಿ.
ಈ ವರ್ಷದ ವಿಷಯವು
ಶಾಂತಿಯ ಆರಂಭ: ತಾಯಿಯ ಪ್ರೀತಿಯ ಭಾಷೆ.
"ತಾಯಿಯ ಪ್ರೀತಿಯ ಭಾಷೆ" ಮೂಲಕ ತಿಳುವಳಿಕೆ ಮತ್ತು ಪರಿಗಣನೆಯ ಹೃದಯಸ್ಪರ್ಶಿ ಮಾತುಗಳೊಂದಿಗೆ
ಸಂವಹನ ನಡೆಸಿ.
ತಾಯಿಯ ಪ್ರೀತಿ ತಲುಪುವ ಸ್ಥಳದಲ್ಲಿ ಶಾಂತಿ ನೆಲೆಸುತ್ತದೆ.
01.“ಹೇಗಿದ್ದೀರಾ?”
ನೀವು ಲಿಫ್ಟ್‌ನಲ್ಲಿ ಭೇಟಿಯಾಗುವ ನೆರೆಹೊರೆಯವರು, ಕಾರಿಡಾರಿನಲ್ಲಿ ಹಾದುಹೋಗುವ ಸ್ನೇಹಿತರು, ನೆರೆಹೊರೆಯನ್ನು ನೋಡಿಕೊಳ್ಳುವ ಮತ್ತು ರಕ್ಷಿಸುವ ಕೃತಜ್ಞ ಜನರು…
ನೀವು ಪ್ರತಿದಿನ ನೋಡುವವರನ್ನು ಅಥವಾ ಹಾದು ಹೋಗುವವರನ್ನು ಹೃತ್ಪೂರ್ವಕ ಹಲೋವಿನೊಂದಿಗೆ ಶುಭಕೋರಿರಿ.
02.“ಧನ್ಯವಾದಗಳು. ಇದಕ್ಕೆಲ್ಲಾ ನೀವೇ ಕಾರಣ. ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ.”
ನಿಮಗಾಗಿ ಬೆಚ್ಚಗಿನ ಆಹಾರವನ್ನು ಸಿದ್ಧಪಡಿಸಿದ ಕೈಗಳಿಗೆ ಮತ್ತು ನಿಮ್ಮನ್ನು ಸುರಕ್ಷಿತವಾಗಿ ನಿಮ್ಮ ಗಮ್ಯಸ್ಥಾನಕ್ಕೆ ಕರೆದೊಯ್ದ ದಯೆಗಾಗಿ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ.
ಬೆಚ್ಚಗಿನ ಹೃದಯಗಳು ಬಂದು ಹೋಗುತ್ತಿದ್ದಂತೆ, ನಿಮ್ಮ ಪರಿಚಿತ ದೈನಂದಿನ ಜೀವನದಲ್ಲಿ ಸಂತೋಷವು ಅರಳುತ್ತದೆ.
03.“ನನ್ನನ್ನು ಕ್ಷಮಿಸಿ. ನಿಮಗೆ ಕಷ್ಟ ಆಗಿರಬೇಕು.”
ನಿಮಗೆ ಯಾರೊಂದಿಗಾದರೂ ಶಾಂತಿಯುತ ಸಂಬಂಧ ಬೇಕೇ?
ನಿಮ್ಮ ಮಾತುಗಳು ಮತ್ತು ಕಾರ್ಯಗಳನ್ನು ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಯೋಚಿಸಿದರೆ ಹೇಗಿರುತ್ತದೆ?
ನಿಮ್ಮ ತಪ್ಪುಗಳಿಗೆ ಕ್ಷಮೆಯಾಚಿಸಿ ಮತ್ತು ನೀವೇ ಮೊದಲು ನಿಮ್ಮ ಸಹಾಯ ಹಸ್ತ ಚಾಚಿ. ದೀನ ಹೃದಯಕ್ಕೆ ಶಾಂತಿ ಸಿಗುತ್ತದೆ.
04.“ಪರವಾಗಿಲ್ಲ. ನನಗೆ ಅರ್ಥವಾಗುತ್ತದೆ.”
ತಪ್ಪುಗಳನ್ನು ಯಾರು ಬೇಕಾದರೂ ಮಾಡಬಹುದು.
ಇಕ್ಕಟ್ಟಿನ ಸನ್ನಿವೇಶಗಳಲ್ಲಿರುವವರನ್ನು ಔದಾರ್ಯದಿಂದ ಅಂಗೀಕರಿಸಿ.
05.“ದಯವಿಟ್ಟು, ನಿಮ್ಮ ನಂತರ.”
ಸಬ್‌ವೇ ಟಿಕೆಟ್ ಗೇಟುಗಳು, ಸೂಪರ್ ಮಾರ್ಕೆಟ್ ಚೆಕ್‌ಔಟ್ ಕೌಂಟರುಗಳು, ಗಾಡಿ ಓಡಿಸುವ ಸಮಯ ... ಬಿಡುವಿಲ್ಲದ ಪರಿಸ್ಥಿತಿಯಲ್ಲಿ, ಮೊದಲು ಬಿಟ್ಟುಕೊಡಲು ಪ್ರಯತ್ನಿಸಿ.
ತಾಳ್ಮೆಯ ಸ್ವಲ್ಪ ಗಳಿಗೆಯು ನಿಮ್ಮ ದಿನವನ್ನು ಶಾಂತಿಯುತವಾಗಿಸುತ್ತದೆ.
06.“ನಿಮ್ಮ ಆಲೋಚನೆಗಳ ಬಗ್ಗೆ ಇನ್ನಷ್ಟು ಕೇಳಲು ನಾನು ಇಷ್ಟಪಡುತ್ತೇನೆ.”
ಅಭಿಪ್ರಾಯಗಳು ಭಿನ್ನವಾಗಿರುವ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಷಯವನ್ನು ಪ್ರತಿಪಾದಿಸುವ ಪರಿಸ್ಥಿತಿಯಲ್ಲಿ, ದಯವಿಟ್ಟು ಒಂದು ಕ್ಷಣ ನಿಲ್ಲಿಸಿ ಆಲಿಸಿ. ಇತರರ ಬಗ್ಗೆ ಗೌರವ ಮತ್ತು ಪರಿಗಣನೆಯು ಪರಿಣಾಮಕಾರಿ ಸಂವಹನದ ಕೀಲಿಗಳಾಗಿವೆ.
07.“ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ (ಅಥವಾ ಪ್ರೋತ್ಸಾಹಿಸುತ್ತೇನೆ). ಎಲ್ಲವೂ ಚೆನ್ನಾಗಿ ನಡೆಯುತ್ತದೆ.”
ನನ್ನನ್ನು ಬೆಂಬಲಿಸುವ ಮತ್ತು ಹುರಿದುಂಬಿಸುವ ಜನರಿದ್ದಾರೆ ಎಂದು ತಿಳಿದುಕೊಳ್ಳುವುದು ಯಾವುದೇ ಪರಿಸ್ಥಿತಿಯಲ್ಲಿ ನನಗೆ ಶಕ್ತಿ ನೀಡುತ್ತದೆ. ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗೆ ದಯವಿಟ್ಟು ನಿಮ್ಮ ಹೃತ್ಪೂರ್ವಕ ಬೆಂಬಲ ಮತ್ತು ಪ್ರೋತ್ಸಾಹವನ್ನು ಕಳುಹಿಸಿ.